ಹಿನ್ನಲೆ ಸಂಗೀತದಲ್ಲಿ ?ನೀನೇನಾ ಭಗವಂತ
Posted date: 26 Mon, Nov 2012 ? 11:05:37 AM

 ಸಾಯಿಸಾಗರ್ ಕ್ರಿಯೇಷನ್ಸ್ ಲಾಂಛನದಲ್ಲಿ ಪ್ರೀತಂಸಾಗರ್ ಅವರು ನಿರ್ಮಿಸುತ್ತಿರುವ ‘ನೀನೇನಾ ಭಗವಂತ’ ಚಿತ್ರಕ್ಕೆ ಬಾಲಾಜಿ  ಡಿಜಿಟಲ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ.
    ಮಂಗಳೂರು, ಉಡುಪಿ, ಬೆಂಗಳೂರಿನಲ್ಲಿ ಚಿತ್ರಕ್ಕೆ ನಲವತ್ತು ದಿನಗಳ ಚಿತ್ರೀಕರಣ ನಡೆದಿದೆ. ಐದು ಹಾಡುಗಳಿರುವ ಚಿತ್ರದಲ್ಲಿ ನಾಲ್ಕು ಗೀತೆಗಳ ಚಿತ್ರೀಕರಣ ಪೂರ್ಣವಾಗಿದೆ.
    ಕೌಟುಂಬಿಕ ಹಾಗೂ ಭಕ್ತಿಪ್ರಧಾನ ಈ ಚಿತ್ರವನ್ನು ಶರತ್ ಬಿಳಿನೆಲೆ ಅವರು ನಿರ್ದೇಶಿಸುತ್ತಿದ್ದಾರೆ. ಸಾಯಿಪ್ರಕಾಶ್, ಬಿ.ರಾಮಮೂರ್ತಿ, ಬಿ.ಆರ್.ಕೇಶವ ಮುಂತಾದವರ ಬಳಿ ಸಹನಿರ್ದೇಶಕರಾಗಿ ದುಡಿದಿರುವ ಇವರು ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಮಲಯಾಳಂ ಚಿತ್ರಗಳಿಗೂ ಸಹ ನಿರ್ದೇಶನ ಮಾಡಿರುವ ಅನುಭವ ಶರತ್ ಅವರಿಗಿದೆ.
     ಸಾಧುಕೋಕಿಲಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸುಂದರನಾಥ ಸುವರ್ಣರ ಛಾಯಗ್ರಹಣ, ಶ್ರೀ ಸಂಕಲನ, ದೇವ್‌ಸಂಪತ್, ಪ್ರದೀಪ್ ಅಂತೋಣಿ ನೃತ್ಯ ನಿರ್ದೇಶನ, ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ಪ್ರೀತಂಸಾಗರ್, ವೇದವ್ಯಾಸ್, ಗೌಸ್‌ಫ಼ಿರ್ ಹಾಗೂ ಬಾಲುಶರ್ಮ ಹಾಡುಗಳನ್ನು ರಚಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed